You are viewing kannada_mana

ಕನ್ನಡ ಮನಗಳ ಮುಕ್ತ ಚರ್ಚೆ

> recent entries
> calendar
> friends
> profile

Wednesday, July 26th, 2006
12:35 pm - ಡೋಂಗಿ ಭಂಗಿ
ದಶಕಗಳ ಕಾಲ ಮಹಾರಾಷ್ಟ್ರ ತನ್ನ ರಾಜಕೀಯ ಬಲದಿಂದ ಗಡಿಯಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಎಸಗುತ್ತ ಬಂದಿದ್ದರೂ(ಗಡಿ ಭಾಗವನ್ನು ಭೇಟಿ ಮಾಡಿದ ಯಾರಿಗೂ ಇದು ಅರ್ಥವಾಗುತ್ತದೆ), ಇದಕ್ಕೆ ತದ್ವಿರುದ್ಧ ಹೇಳಿಕೆಯನ್ನು ಕೇಂದ್ರ ಸರಕಾರದ ಮುಂದೆ ಮಂಡಿಸಿ ಹೊರಬರುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‍ರಾವ್ ದೇಶ್‍ಮುಖ್‍ರ ಈ ಭಂಗಿಯಲ್ಲಿ ವಿಶಾದದ ಮುಖಭಾವ ಕಪಟತನದಿಂದ ಕೂಡಿರುವುದು ಎದ್ದು ಕಾಣುತ್ತದೆ.


(comment on this)

Tuesday, July 25th, 2006
5:24 pm - ನೆನಪಿರಲಿ
ಒಂದೇ ಸಾಲಿನಲ್ಲಿ ಹೇಳೋದಾದ್ರೆ ಸಿನಿಮಾ ಚೆನ್ನಾಗಿದೆ, ಹಾಡುಗಳು ಸಾಂದರ್ಭಿಕವಾಗಿವೆ, ಹೀಗಾಗಿ ಇಷ್ಟವಾಗುತ್ತವೆ.ಆದರೆ ತಾಂತ್ರಿಕ ದೋಷವಿದೆ. ನಟ ನಟಿಯರು ಒಮ್ಮೆ ಚೆನ್ನಾಗಿ ಕಂಡ್ರೆ ಇನ್ನೊಮ್ಮೆ ಚೆನ್ನಾಗಿ ಕಾಣೋದಿಲ್ಲ. ಒಟ್ಟಾರೆ ಇಷ್ಟವಾಗುವ ಅಂಶಗಳೆಂದರೆ,
೧)ಕಥೆ
೨)ಹಾಡುಗಳು
೩)ನಿರ್ದೇಶನ
೪)ಸಂಭಾಷನೆ

ಇಷ್ಟವಾಗದಿರುವುದು, camera work.

ಒಟ್ಟಾರೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ.

(comment on this)

Friday, July 21st, 2006
4:28 pm - Technorati Profile
Technorati Profile

(comment on this)

10:13 am - "ನೀನೆಲ್ಲೋ ನಾನಲ್ಲೆ ಹಾಡು" ಚನ್ನಾಗಿದೆ,
ನೀನೆಲ್ಲೋ ನಾನಲ್ಲೆ, ಸಿನಿಮಾ ನೋಡಿ ಹೇಗಿದೆ ಅಂತ ಬರೆಯೋಣವೇ?

current mood: energetic

(comment on this)

Tuesday, July 18th, 2006
12:46 pm - ಕನ್ನಡಕ್ಕೆ ಡಬ್ಬಿಂಗ್ ಬೇಕೆ, ಬೇಡವೆ?
ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡುವದರಿಂದ ಆಗುವೆ ಲಾಭಗಳೇನು? ಹಾಗು ತೊಂದರೆಗಳೇನು? ನಾನಿಲ್ಲಿ ಕೆಲ ಲಾಭಗಳನ್ನು ಪಟ್ಟಿ ಮಾಡಲು ಯತ್ನಿಸಿದ್ದೇನೆ,
೧) ಉತ್ತಮ ಗೀತೆಗಳು ಲಭಿಸುತ್ತವೆ.
೨) ಕನ್ನಡ ಚಿತ್ರರಂಗಕ್ಕೆ ಆರೋಗ್ಯಕರ ಸ್ಪರ್ದೆ ದೊರೆಯುತ್ತದೆ.
೩) ಕನ್ನಡ ಸಾಹಿತ್ಯದಂತೆ ಚಿತ್ರಲೋಕವೂ ಸಮ್ರುದ್ಧವಾಗುತ್ತದೆ.
೪) ಕನ್ನಡ ಧ್ವನಿ ಕಲಾವಿದರಿಗೆ ಕೆಲಸ ದೊರೆಯುತ್ತೆ.
ಇನ್ನೂ ಅನೇಕ ಲಾಭಗಳನ್ನು ಪಟ್ಟಿ ಮಾಡಬಹುದು.
ತೊಂದರೆಗಳು,
೧) ಕನ್ನಡ ಕಲಾವಿದರು ಹೆಚ್ಚಿಗೆ ಸ್ಪರ್ದಿಸಬೇಕಾಗುತ್ತದೆ.
೨) ಕಳಪೆ ಚಿತ್ರ ರೆಲೀಸ್ ಕೂಡ ಆಗೊಲ್ಲ.

ಈಗಿನ ಮಟ್ಟಿಗೆ ಕನ್ನಡದಲ್ಲಿ ಎಂಥ ಚಿತ್ರ ಮಾಡಿದರೂ ಹಾಕಿರೋ ಹಣ ಅಂತೂ ಬಂದೇ ಬರುತ್ತೆ. ಹ್ಯಾಗಿದೆ ಅಂತನಾದ್ರೂ ನೋಡೊಕೆ ಒಂದಿಷ್ಟು ಜನ ಬರ್ತಾರಲ್ಲಾ, ಅಲ್ಲೆ ನಿರ್ಮಾಪಕನ ಹಣ ಸಂದಾಯವಾಗಿರುತ್ತೆ. ಅದೇನೇ ಇರಲಿ, ಕನ್ನಡ ಚಿತ್ರರಂಗದವರು ಮಾತ್ರ, ಡಬ್ಬಿಂಗ್ ಅನ್ನೋ ಮಾತು ಬಂದ ತಕ್ಷಣ ವಿರೋಧಕ್ಕೆ ನಿಲ್ಲುತ್ತಾರೆ, ಅದು ತಮ್ಮ ಸ್ವಾರ್ಥಕ್ಕಾಗಿ ಮಾತ್ರ, ಆದರೆ ಇವರು ಭಾಷೆಯ ಏಳ್ಗೆಗೆ ಮಾರಕವಾಗಿ ನಿಂತಿದ್ದಾರೆ, ಇವರ ಕೂಗಾಟವನ್ನು ಬದಿಗಿಟ್ಟು ಕನ್ನಡಕ್ಕೆ ಡಬ್ಬಿಂಗ್ ಟ್ರೆಂಡ್ ತರಬೇಕು, ನೀವಿಲ್ಲಿ ಆಧ್ಯತೆ ಭಾದ್ಯತೆಗಳನ್ನು ದಯವಿಟ್ಟು ಪಟ್ಟಿ ಮಾಡಿ.

current mood: nervous

(9 comments | comment on this)> top of page
LiveJournal.com